ಅತೀ ಕಡಿಮೆ ಖರ್ಚಿನ ಹಣ್ಣಿನ ಬೆಳೆ- ಅನನಾಸು

ಅನಾನಾಸು ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ತಾಜಾ ಹಣ್ಣು ಮತ್ತು ಸಂಸ್ಕರಣೆಗೆ ಬಳಕೆಯಾಗುವಂತದ್ದು. ಪ್ರಸ್ತುತ ಗ್ರಾಹಕರ ಅಭಿರುಚಿಗಾಗಿ ಬೆಳೆಗಾರರು  ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟರೆ ಈ ಬೆಳೆಗೆ ಕೀಟ ನಾಶಕ- ರೋಗ ನಾಶಕ ಬಳಕೆಯೇ ಬೇಕಾಗಿಲ್ಲ. ಇದು ಬೇಸಿಗೆ ಕಾಲದ ಪ್ರಮುಖ ಪೌಷ್ಟಿಕ  ಹಣ್ಣಿನ ಬೆಳೆ ಇದು. ಅನನಾಸಿನ  ವಿಶೇಷ ಎಂದರೆ ಉಳಿದ ಹಣ್ಣು ಹಂಪಲಿನಂತೆ ಇದಕ್ಕೆ ಹಣ್ಣು ನೊಣ ಇಲ್ಲ. ಕೀಟ ರೋಗ ಬಾಧೆಗಳು  ತೀರಾ ಕಡಿಮೆ. ಇದನ್ನು ಒಂದು ರಾಸಾಯನಿಕ ಮುಕ್ತ…

Read more
ಹತ್ತಾರು ಲಕ್ಷ ಬೆಲೆಬಾಳುವ ಸಾಗುವಾನಿ ಮರ.

ಸಾಗುವಾನಿಯೂ ಶ್ರೀಗಂಧಕ್ಕೆ ಸಮನಾದ ಮರ.

ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! ಶ್ರೀಗಂಧ ಬೆಳೆಸಿ ಕೋಟಿ ನಿರೀಕ್ಷೆಯಲ್ಲಿ ನಿರಂತರ ಜೇಬಿನಲ್ಲಿ ಕೆಂಡ ಇಟ್ಟುಕೊಂಡು ಜೀವನ ಕಳೆಯುವ  ಬದಲು ಇದ್ಯಾವುದರ ಭಯವೂ ಇಲ್ಲದೆ ಸಾಗುವಾನಿ ಬೆಳೆಸಿ ಬದುಕಬಹುದು. ಕೋಟಿಯಲ್ಲದಿದ್ದರೂ ಲಕ್ಷಾಂತರ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ. ಅಸಾಮಾನ್ಯ…

Read more
sugarcane crop

ಕಬ್ಬು ಬೆಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ ಹೀಗೆ.

ಕೂಳೆ ಬೆಳೆ ಬೆಳೆದರ ಖರ್ಚು ತುಂಬಾ ಕಡಿಮೆಯಾಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಇಳುವರಿ ಚೆನ್ನಾಗಿಯೇ ಬರುತ್ತದೆ. ನಮ್ಮ ದೇಶದಲ್ಲಿ ಕೆಲವು ರೈತರು ಕೂಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದರೆ ಬಹಳ ಜನ ಕಡಿಮೆ ಇಳುವರಿ ಪಡೆಯುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ಪಡೆಯುತ್ತಾರೆ. ನಮಗೂ ಸರಿಯಾದ ಬೇಸಾಯ ಕ್ರ ಮ ಅನುಸರಿಸಿದರೆ 2-3 ಕೂಳೆ ಬೆಳೆಯನ್ನು ಬೆಳೆಸಲು ಸಾಧ್ಯವಿದೆ. ನಮ್ಮಲ್ಲಿ ಸಾಮಾನ್ಯವಾಗಿ ತುಂಬಾ ಸೋಮಾರಿಗಳು ಮಾತ್ರ ಕೂಳೆ…

Read more
Areca yield

ಅಡಿಕೆಗೆ ಬೇಸಿಗೆಯಲ್ಲಿ ಗೊಬ್ಬರ ಕೊಟ್ಟರೆ ಭಾರೀ ಪ್ರಯೋಜನ.

ಅಡಿಕೆ ತೆಂಗು ಗೆ ಹಾಗೆಯೇ ಯಾವುದೇ ಧೀರ್ಘಾವಧಿ ಬೆಳೆಗಳಿಗೆ ಪೋಷಕಗಳನ್ನು  ಬೇಸಿಗೆಯಲ್ಲಿ  ಕೊಡುವುದು ಅಧಿಕ ಇಳುವರಿ  ದೃಷ್ಟಿಯಿಂದ  ಉತ್ತಮ. ಇದರಲ್ಲಿ ಬೆಳೆಗಳಿಗೆ ಯಾವುದೇ ಹಾನಿ ಇರುವುದಿಲ್ಲ. ನಾವು ಕೊಡುವ ಪೋಷಕವನ್ನು ಸಸ್ಯಗಳು ಹೀರಿಕೊಳ್ಳಲು ಬೇರಿನ ಭಾಗದಲ್ಲಿ ತೇವಾಂಶ ಇರಬೇಕು. ಇದರ ಫಲಿತಾಂಶ ಅಧ್ಭುತ. ಮನುಷ್ಯ ಪ್ರಾಣಿ ಯಾವುದೇ ಜೀವಿಗಳ ಶರೀರದ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಯ ಆಗುವುದು ಬೆವರುವ ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ಹಸಿವು ಹೆಚ್ಚು. ತಿಂದದ್ದು ಬೇಗ ಜೀರ್ಣ ಆಗುತ್ತದೆ. ಶರೀರ ಹೆಚ್ಚು ಶಕ್ತಿಯನ್ನು…

Read more

ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ. ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ. ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ…

Read more

ಬೇಗ ಬೆಳೆಯುವ, ನಾರು ಇಲ್ಲದ ಹರಿವೆಯ ತಳಿಗಳು.

ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.  ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ.           ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ. ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ  ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ. ವಾಣಿಜ್ಯ ತಳಿಗಳು: ದೇಶದ…

Read more
ಕೆಂಪು ಅಡಿಕೆ ಧಾರಣೆ

ಡಿಸೆಂಬರ್ ಎರಡನೇ ಶುಕ್ರವಾರ-10-12-2021.ಅಡಿಕೆ ಧಾರಣೆ.

ಅಡಿಕೆ ಬೆಳೆಗಾರರು  ಹೆಚ್ಚಾಗಿ  ವಾರದ ಮೊದಲ ದಿನ ಸೋಮವಾರದ ಧಾರಣೆ ಹೇಗಿರುತ್ತದೆ ಮತ್ತೆ ಶುಕ್ರವಾರದ ಧಾರಣೆ ಹೇಗಿರುತ್ತದೆ ಎಂದು ಗಮನಿಸಿ ಏರಿಳಿತವನ್ನು ಲೆಕ್ಕಾಚಾರ ಹಾಕುತ್ತಾರೆ. ಸೋಮವಾರ ಏರಿಕೆಯಾದರೆ ಇಡೀ ವಾರ  ಹಾಗೆಯೇ ಮುಂದುವರಿಯುತ್ತದೆ. ಶುಕ್ರವಾರದ ದರ ಮುಂದಿನ ವಾರದ ದರವನ್ನು ಅಂದಾಜು ಮಾಡಲು ಸಹಾಯಕ. ಇಂದು ದಿನಾಂಕ 10-12-2021 ಶುಕ್ರವಾರ ದರ ಇಳಿಕೆಯಾಗದೆ ಸ್ವಲ್ಪ ಏರಿಕೆಯೇ ಆದ ಕಾರಣ ಮುಂದಿನ ವಾರವೂ ಹೀಗೆ ಮುಂದುವರಿಯಬಹುದು, ಇಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹೊಸತು 43,500-45200 ತನಕ, ಹಳೆ…

Read more
ಮುಂಗಾರು ನಂತರದ ಗೊಬ್ಬರದ ಎರಡನೇ ಕಂತು: ರೈತರು ನಿರ್ಲಕ್ಷಿಸಬಾರದ ಮಹತ್ವದ ಹಂತ

ಮುಂಗಾರು ನಂತರದ ಗೊಬ್ಬರದ ಎರಡನೇ ಕಂತು: ರೈತರು ನಿರ್ಲಕ್ಷಿಸಬಾರದ ಮಹತ್ವದ ಹಂತ!

ಅನೇಕ ರೈತರಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಹಾಕುವುದು ಎಂದರೆ ಮುಂಗಾರು ಆರಂಭವಾಗುವ ಸಮಯ ನೆನಪಿಗೆ ಬರುತ್ತದೆ. ಮಳೆ ಬರುವ ಮೊದಲು ಗೊಬ್ಬರ ಹಾಕಿದರೆ, ಮಳೆನೀರು ಅದನ್ನು ಕರಗಿಸಿ ಪೋಷಕಾಂಶಗಳನ್ನು ಬೇರುಗಳಿರುವ ಮಣ್ಣಿನ ಪದರಕ್ಕೆ ತಲುಪಿಸುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಇದು ಕೃಷಿಯಲ್ಲಿ ಮಹತ್ವದ ಪದ್ಧತಿಯೇ ಆಗಿದೆ. ಆದರೆ, ಅಷ್ಟೇ ಮಹತ್ವವಿರುವ ಮತ್ತೊಂದು ಹಂತವಿದೆ. ಅದುವೇ ಮುಂಗಾರು ಮಳೆ ಮುಗಿದ ತಕ್ಷಣದ ಅವಧಿಯಲ್ಲಿ ಗೊಬ್ಬರ ಹಾಕುವುದು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಗಾಲ ಮುಗಿದರೆ ಬೆಳೆಗಳಿಗೆ ಪೋಷಕಾಂಶಗಳ ಅಗತ್ಯ…

Read more
ಸರ್ವ ರೋಗ – ಕೀಟ ನಿಯಂತ್ರಕ ಬೂದಿ

ಸರ್ವ ರೋಗ- ಕೀಟ ನಿಯಂತ್ರಣಕ್ಕೆ ಬೂದಿ ಮದ್ದು. ಹೇಗೆ ಗೊತ್ತೇ?

ಸಾವಯವ ತ್ಯಾಜ್ಯಗಳಾದ ಮರಮಟ್ಟು ಹಾಗೂ ಬೆಳೆ ಉಳಿಕೆಗಳನ್ನು ಸುಟ್ಟಾಗ ಬೂದಿ  ದೊರೆಯುತ್ತದೆ. ಇದರಲ್ಲಿ  ವಿಶೇಷ ಶಕ್ತಿ ಇದ್ದು, ಅನಾದಿ ಕಾಲದಿಂದಲೂ ಇದನ್ನು ಒಂದು ಸಾಂಪ್ರದಾಯಿಕ ಸಾವಯವ ಕೀಟ- ರೋಗ ನಿಯಂತ್ರಕ ಮತ್ತು  ಬೆಳೆ  ಪೋಷಕವಾಗಿ ಬಳಸುತ್ತಾ ಬರಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಅನುಸರಿಸಲಾಗುತ್ತಿದ್ದ  ಈ ಕ್ರಮ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಹಿರಿಯರ ನಾಳ್ನುಡಿ ಸತ್ಯವಾದದ್ದು. ಹಿಂದೆ ಹಳ್ಳಿಗಳಲ್ಲಿ  ಪ್ರತೀ ಮನೆಯಲ್ಲೂ ವರ್ಷಕ್ಕೆ ಒಂದಷ್ಟು ಕಟ್ಟಿಗೆ ಸುಟ್ಟ ಬೂದಿ (Wood Ash)ಸಿಗುತ್ತಿತ್ತು….

Read more
error: Content is protected !!