ಬೆಲ್ಲ – ಯಾವುದರಲ್ಲಿ ರಾಸಾಯನಿಕ ಇದೆ – ಇಲ್ಲ.
ನಾವೆಲ್ಲಾ ಅಂಗಡಿಯಿಂದ ಕೊಳ್ಳುವ ಆಕರ್ಷಕ ಹಳದಿ ಮಡಿ ಬಣ್ಣದ ಬೆಲ್ಲಕ್ಕೂ, ನೈಜ ಬೆಲ್ಲದ ಬಣ್ಣಕ್ಕೂ ಅಜಗಜಾಂತರ ವೆತ್ಯಾಸ ಇದ್ದು, ಅಂಗಡಿಯ ಈ ಬೆಲ್ಲದಲ್ಲಿ ಏನಿದೆ ಎಂಬುದನ್ನು ಆಹಾರ ಇಲಾಖೆ ಪರಿಶೀಲಿಸುವುದು ಅಗತ್ಯ. ಆದರೂ ಕಡಿಮೆ ರಾಸಾಯನಿಕ ಬಳಸಿ ತಯಾರದ ಬೆಲ್ಲವನ್ನು ಗುರುತಿಸುವುದು ಕಷ್ಟವಲ್ಲ. ಬೆಲ್ಲ ಎಂಬುದು ಕಬ್ಬಿನ ರಸವನ್ನು ಕುದಿಸಿ ಅದರ ನೀರಿನ ಅಂಶವನ್ನು ತೆಗೆದು ಸಿಹಿ ಅಂಶವನ್ನು ಉಳಿಸಿ ಪಡೆಯುವ ವಸ್ತು. ಇದರ ನೈಜ ಸ್ಥಿತಿ ದ್ರವ ರೂಪ. ಇದನ್ನು ಗ್ರಾಹಕರ ಇಷ್ಟಕ್ಕೆ ಮತ್ತು ದಾಸ್ತಾನು,…
