ಕೆಂಪು ಅಡಿಕೆ

ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…

Read more
ಸೀಬೆ ಸಸ್ಯದ ಎಲೆ ಹೀಗೆ ಬಣ್ಣ ಕಳೆದುಕೊಳ್ಳುವುದಕ್ಕೆ ಕಾರಣ

ಸೀಬೆ ಸಸ್ಯ ಸೊರಗುವುದಕ್ಕೆ ಕಾರಣ ಮತ್ತು ಪರಿಹಾರ

ಸೀಬೆ (ಪೇರಳೆ) ಹಣ್ಣು ಹಂಪಲು ಬೆಳೆಗಳಲ್ಲಿ  ಲಾಭದಾಯಕ ಹಣ್ಣಿನ ಬೆಳೆಯಾಗಿದೆ. ಇದು ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ಹಣ್ಣಿನ ಬೆಳೆ. ಕೆಲವು ಪ್ರದೇಶಗಳಲ್ಲಿ ಸೀಬೆ ಸಸ್ಯ ಏನೇ ಮಾಡಿದರೂ ಏಳಿಗೆ ಆಗುವುದಿಲ್ಲ. ಸಸ್ಯದ ಎಲೆಗಳು ತಿಳಿ ಹಳದಿ ಬಣ್ಣ ಮತ್ತು ತಾಮ್ರದ ಬಣ್ಣದ ಮೂಲಕ ತನ್ನ ಅನಾರೋಗ್ಯವನ್ನು ತೋರಿಸುತ್ತದೆ. ಸೀಬೆ ಸಸ್ಯದ ಎಲೆಗಳು ಹೀಗೆ ಆದರೆ ಅವು ಒಂದು ರೀತಿಯ ಪರಾವಲಂಭಿ ಜಂತು ಹುಳದ ಬಾಧೆ ಎನ್ನಬಹುದು. ಇದನ್ನು ಕರಾರುವಕ್ಕಾಗಿ ತಿಳಿಯಲು ಒಂದು ಬೇರನ್ನು ಅಗೆದು ನೋಡಿ. ನಮ್ಮ…

Read more

ಕೀಟನಾಶಕ ಇಲ್ಲದೆ ಅಡಿಕೆ ಉಳಿಸಬಹುದು.

ಕೀಟನಾಶಕ ಬಳಸದೆ ಅಡಿಕೆ ಉಳಿಸಿಕೊಂಡವರು ಇದ್ದಾರೆ. ಕೆಲವರು ಅಡಿಕೆ ಮಿಡಿ ಉಳಿಸಲು ಪ್ರತೀ ಹೂ ಗೊಂಚಲಿಗೂ ತಿಂಗಳು ತಿಂಗಳು ಕೀಟ ನಾಶಕ ಸಿಂಪಡಿಸುವವರೂ ಇದ್ದಾರೆ. ಸಿಂಪಡಿಸದವರಲ್ಲೂ ಫಸಲು ಇದೆ. ಸಿಂಪಡಿಸಿದಲ್ಲಿಯೂ ಫಸಲು ಇದೆ. ಹೀಗಿರುವಾಗ ಅಡಿಕೆ ಮರದ ಆರೋಗ್ಯ ಹೊಂದಿಕೊಂಡು ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಅಡಿಕೆ ಮರದ ಹೂ ಗೊಂಚಲಿಗೆ ಬರುವ ಕೀಟಗಳಲ್ಲಿ ಈ ತನಕ ಗುರುತಿಸಲಾದದ್ದು, ಸಿಂಗಾರ ತಿನ್ನುವ ಕಂಬಳಿ ಹುಳ. ಬಸವನ ಹುಳ ಪೆಂಟಟೋಮಿಡ್  ಬಗ್. ಇದಲ್ಲದೆ ಬೇರೆ…

Read more

ಕುರಿ – ಮೇಕೆಗಳು ತೂಕ ಬರುವುದು ಹೀಗೆ.

ಆಡು ಸಾಕುವುದು ಬ್ಯಾಂಕಿನಲ್ಲಿ ದುಡ್ಡು ಇಟ್ಟಂತೆ. ಇದನ್ನು ಯಾವಾಗ ಬೇಕಾದರೂ ನಗದೀಕರಣ ಮಾಡಿಕೊಳ್ಳಬಹುದು.  ಇದಕ್ಕೆ ಹೂಡಿದ ಬಂಡವಾಳ  ಒಂದೇ ವರ್ಷದಲ್ಲಿ ದ್ವಿಗುಣ. ಆ ಕಾರಣಕ್ಕೆ ಆಡು ಸಾಕಣಿಕೆ ಒಂದು ಕೃಷಿ ಪೂರಕ  ವೃತ್ತಿಯಾಗಿ ಬೆಳೆಯುತ್ತಿದೆ. ಬರೇ ಆಡನ್ನು ಎಲ್ಲೆಂದರಲ್ಲಿ ಮೇಯಲು ಬಿಟ್ಟಾಕ್ಷಣ  ಅದು ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲಾರದು. ಅದಕ್ಕೆ  ಪೌಷ್ಟಿಕ, ಮೇವು ಮತ್ತು ಆಹಾರ ನೀಡಿದಾಗ ಮಾತ್ರ ಅದು ತೂಕ ಬರುತ್ತದೆ. ಬೇಗ ಮರಿ ಹಾಕುತ್ತದೆ. ಪೌಷ್ಟಿಕ ಮೇವು ಯಾವುದು: ಹಾಲು ಕೊಡುತ್ತಿರುವ ಆಡಿಗೆ  ದಿನಕ್ಕೆ …

Read more
ಶಿಲೀಂಧ್ರ ನಾಶಕಗಳ ಅತಿಯಾದ ಬಳಕೆ: ರೋಗ ನಿಯಂತ್ರಣವೇ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದೇ?

ಶಿಲೀಂಧ್ರ ನಾಶಕಗಳ ಅತಿಯಾದ ಬಳಕೆ: ರೋಗ ನಿಯಂತ್ರಣವೇ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದೇ?

ರೋಗ ನಿಯಂತ್ರಣಕ್ಕೆ ಶಿಲೀಂಧ್ರನಾಶಕ ಬಳಸಿ — ಆದರೆ ಮಣ್ಣಿನಲ್ಲಿರುವ ಎಲ್ಲಾ ಶಿಲೀಂಧ್ರಗಳನ್ನು ನಾಶಮಾಡಲು ಅಲ್ಲ. ಕೃಷಿಯಲ್ಲಿ ರೋಗ ನಿಯಂತ್ರಣಕ್ಕೆ ಶಿಲೀಂಧ್ರನಾಶಕಗಳು ಬಹಳ ಮುಖ್ಯವಾದ ಸಾಧನಗಳಾಗಿವೆ. ಶಿಲೀಂಧ್ರಗಳು ಹಾಗೂ ಶಿಲೀಂಧ್ರದಂತಿರುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ನಿಯಂತ್ರಿಸಲು ರೈತರು ಇವುಗಳನ್ನು ಬಳಸುತ್ತಾರೆ. ಸರಿಯಾದ ಔಷಧಿ, ಸರಿಯಾದ ಪ್ರಮಾಣ, ಸರಿಯಾದ ಸಮಯ ಮತ್ತು ಸರಿಯಾದ ವಿಧಾನದಲ್ಲಿ ಬಳಸಿದರೆ ಶಿಲೀಂಧ್ರನಾಶಕಗಳು ಬೆಳೆಗಳನ್ನು ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಆದರೆ ಇಲ್ಲಿ ಒಂದು ಮುಖ್ಯ ವಿಚಾರವನ್ನು ನಾವು ಗಮನಿಸಬೇಕು. ಕೆಲವೊಮ್ಮೆ ತಜ್ಞರು ಸೂಚಿಸಿದ ಪ್ರಮಾಣಕ್ಕಿಂತ…

Read more
ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಸಗಣಿ ಗೊಬ್ಬರ

ಸಗಣಿ ಗೊಬ್ಬರ – ಪರಿಪೂರ್ಣ ಸಾವಯವ ಪೋಷಕವಲ್ಲ.

ಕೆಲವು ರೈತರು ನಾನು ನನ್ನ ಬೆಳೆಗಳಿಗೆ ಹಸುವಿನ ಸಗಣಿ ಗೊಬ್ಬರವನ್ನು ಮಾತ್ರ ಕೊಡುವುದು ಎನ್ನುತ್ತಾರೆ. ಮರಗಳು ಹಚ್ಚ ಹಸುರಾಗಿ ಬೆಳೆಯುತ್ತವೆಯಾದರೂ ಪರಿಪೂರ್ಣ ಪೋಷಕಗಳು ಇಲ್ಲದ ಕಾರಣ ಫಸಲು ಅಷ್ಟಕ್ಕಷ್ಟೇ.ಯಾವುದೇ ಪ್ರಾಣಿಯ ತ್ಯಾಜ್ಯಗಳಿಂದ ಪಡೆಯುವ ಹಿಕ್ಕೆ ಅಥವಾ ಮಲದಲ್ಲಿ  ಎಷ್ಟು ಪೋಷಕಗಳಿರುತ್ತವೆ ಎಂಬುದು ಹಲವಾರು ಸಂಗತಿಗಳ ಮೇಲೆ ಅವಲಂಭಿಸಿದೆ. ಪ್ರಾಣಿಯ ದೇಹ, ಅವುಗಳ ತಳಿ, ವಯಸ್ಸು, ತೂಕ, ಆಹಾರ ಸೇವಿಸುವುದರ ಮೇಲೆ ಅವು ಮಾಡಿಕೊಡುವ ಗೊಬ್ಬರದ ಪ್ರಮಾಣ ಹೊಂದಿರುತ್ತದೆ. ಇಷ್ಟು ಮಾತ್ರವಲ್ಲ ಆ ಪ್ರಾಣಿಯ ಆರೋಗ್ಯ  ಮತ್ತು ಅದು…

Read more
ಟೆಂಡರ್ ನಲ್ಲಿ ಅಡಿಕೆ ಪ್ರದರ್ಶನ

12-10-2021 ರ ಅಡಿಕೆ, ಕರಿಮೆಣಸು,ಕೊಬ್ಬರಿ ಕಾಫೀ ಧಾರಣೆ.

ಕಳೆದ ಎರಡು ವಾರದಿಂದ ರಾಶಿ ಅಡಿಕೆ ಮತ್ತು ಚಾಲಿ ದರಗಳು ಇಳಿಮುಖ ಹಾದಿಯಲ್ಲಿ  ಸಾಗುತ್ತಿರುವ ಕಾರಣ, ಬೆಳೆಗಾರರು ಮಾರಾಟಕ್ಕೆ ಮುಂದಾಗಿದ್ದಾರೆ. ಸಹಜವಾಗಿ ಬೆಲೆ ಇಂದು 12-10-2021 ರಂದು ಇಳಿಕೆಯೇ. ಕರಿಮೆಣಸಿನ ಬೆಲೆ ಏರುವ ಕಾರಣ ಕೊಡುವವರು ಕಡಿಮೆ.ಬೆಳೆಗಾರರ ನಡೆಯ ಮೇಲೆ ಮಾತ್ರ ಬೆಲೆ ಸ್ಥಿತರೆ ಹಾಗೂ ಏರಿಕೆ ಆಗಲು ಸಾಧ್ಯ ಇದನ್ನು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ದರ ಇಳಿಕೆಯಾದ ತಕ್ಷಣ ಅಧಿಕ ಪ್ರಮಾಣದಲ್ಲಿ  ರೈತರು ಮಾರಾಟಕ್ಕೆ ಮುಂದಾಗುತ್ತಾರೆಯೋ  ತಿಳಿಯುತ್ತಿಲ್ಲ. ಯಾವ ಬೆಳೆಗಾರನಿಗೂ ಮಾರುಕಟ್ಟೆಯಲ್ಲಿ ಗರಿಷ್ಟ ಬೆಲೆ ಬಂದು…

Read more
Black Pepper: Is It Naturally Black

ಗ್ರಾಹಕರ ಆಯ್ಕೆ: ನೈಸರ್ಗಿಕ ಗುಣಮಟ್ಟವೇ? ಆಕರ್ಷಕ ಬಣ್ಣವೇ?

ನಾವು ನೋಡುತ್ತಿರುವುದು ಗುಣಮಟ್ಟವೇ, ಅಥವಾ ನಮಗೆ ತೋರಿಸಲಾಗುತ್ತಿರುವ ಆಕರ್ಷಣೆಯೋ? ಮಾರುಕಟ್ಟೆಯಲ್ಲಿ ಯಾವುದೇ ಆಹಾರ ಪದಾರ್ಥವನ್ನು ಖರೀದಿಸುವಾಗ ನಾವು ಸಾಮಾನ್ಯವಾಗಿ ಅದರ ಬಣ್ಣ, ಗಾತ್ರ, ಹೊಳಪು, ಆಕಾರ ಮತ್ತು ಹೊರನೋಟವನ್ನು ಗಮನಿಸುತ್ತೇವೆ. “ಇದು ತುಂಬಾ ಕಪ್ಪಾಗಿದೆ, ಅಂದರೆ ಉತ್ತಮ ಗುಣಮಟ್ಟದ್ದು.” “ಇದು ತುಂಬಾ ಕೆಂಪಾಗಿದೆ, ಅಂದರೆ ಒಳ್ಳೆಯ ಅಡಿಕೆ.” “ಎಳ್ಳು ತುಂಬಾ ಕಪ್ಪಾಗಿದೆ, ಅಂದರೆ ಉತ್ತಮ.” ಬೇಳೆಗಳು: ಹೊಳಪಾಗಿದೆ ಅದೇ ಉತ್ತಮ. “ಒಣದ್ರಾಕ್ಷಿ ತುಂಬಾ ಹೊಳೆಯುವ ಹಳದಿ ಬಣ್ಣದಲ್ಲಿದೆ, ಅಂದರೆ ಉತ್ತಮ ಗುಣಮಟ್ಟದ್ದು.” ಇಂತಹ ನಂಬಿಕೆಗಳು ಗ್ರಾಹಕರಲ್ಲಿ ಸಾಮಾನ್ಯವಾಗಿವೆ….

Read more
error: Content is protected !!