ಹನಿ ನೀರಾವರಿ ಸಾಧನ

ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ನೀವು ತಿಳಿದಿರಬೇಕಾದ ವಿಷಯಗಳು.

ಈ ವರ್ಷ ಬಹಳಷ್ಟು ಜನ ಅಡಿಕೆ ತೋಟ ಮಾಡುತ್ತಿದ್ದಾರೆ. ಹೆಚ್ಚಿನವರ ಆಯ್ಕೆ ಹನಿ ನೀರಾವರಿ. ಜನ ನೀರು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಕೊಡುವಷ್ಟು ಮುಂದುವರಿದದ್ದು ಸಂತೋಷದ ವಿಚಾರ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಾಗ, ಅಳವಡಿಸುವವರ ಜೊತೆಗೆ ನಾವೂ ಸ್ವಲ್ಪ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದಿದ್ದರೆ ಬಹಳ ಒಳ್ಳೆಯದು. ಹನಿ ನೀರಾವರಿ ಎಂದರೆ ಲಭ್ಯವಿರುವ ನೀರನ್ನು ಎಲ್ಲೆಲ್ಲಿ ಬೆಳೆಗಳಿವೆಯೋ ಅಲ್ಲಿಗೆ ತಲುಪಿಸಿ ಆ ಸಸ್ಯಕ್ಕೆ ದಿನಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕೊಡುವ ವ್ಯವಸ್ಥೆ. ಇಲ್ಲಿ…

Read more
ಅಧಿಕ ಮೊಳಕೆಗಳು ಇದರ ವಿಶೇಷ

ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.

ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ. ಬಾಳೆ ಎಲೆ ಎಂಬುದು ಪರಿಸರ  ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ…

Read more
ಇಂದಿನಿಂದ 4 ದಿನ ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ.

ಇಂದಿನಿಂದ 4 ದಿನ  ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ. 

ಬೆಂಗಳೂರಿಗೆ ಕೃಷಿಕರು ಹೋಗಬೇಕಿದ್ದರೆ ಅಲ್ಲಿ ಅವರ ಆಕರ್ಷಣೆಯ ವಿಷಯ ವಸ್ತು ಇರಬೇಕು. ಇಲ್ಲಿನ ಕೃಷಿ ವಿಶ್ವ ವಿಧ್ಯಾನಿಲಯವು ಕೃಷಿ ಮೇಳದ ಮೂಲಕ ರಾಜ್ಯ ಹೊರ ರಾಜ್ಯದ ಕೃಷಿಕರನ್ನು ಆಹ್ವಾನಿಸುತ್ತಿದೆ. ಇಂದಿನಿಂದ 4 ದಿನ ನವೆಂಬರ್  2022  ರ ದಿನಾಂಕ 3 -4-5-6 ರ ಗುರುವಾರ, ಶುಕ್ರವಾರ, ಶನಿವಾರ  ಮತ್ತು ಭಾನುವಾರಗಳಂದು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ  (ಜಿಕೆವಿಕೆ GKVK)  ನಡೆಸಲಾದ ಎಲ್ಲಾ ಕೃಷಿ, ತೋಟಗಾರಿಕೆ ಮುಂತಾದ  ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸಿಕೊಡುವ ಉತ್ಸವ ಇದಾಗಿರುತ್ತದೆ. ರೈತ ಇಲ್ಲಿಗೆ ಭೇಟಿ…

Read more
ಅಡಿಕೆ ಹರಾಜು ಪ್ರಾಂಗಣ

ಅಡಿಕೆ, ರಬ್ಬರ್, ಕಾಫೀ, ಕರಿಮೆಣಸು, ಧಾರಣೆ – ದಿನಾಂಕ – 05-10-2021

ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇಂದು ದಿನಾಂಕ- 05-10-2021 ಅಡಿಕೆ ಟೆಂಡರ್ ವಿವರ. ಹಾಗೂ ಕರಿಮೆಣಸು, ಕೊಬ್ಬರಿ, ಕಾಫೀ, ರಬ್ಬರು ದರಗಳು. ಕೆಂಪಡಿಕೆ ಧಾರಣೆ ಇಳಿಕೆಯಾಗುತ್ತಿದೆ. ಚಾಲಿ ಸ್ಟಡೀ ಯಾಗಿ ಮುಂದುವರಿದಿದೆ. ಚಾಲಿ ಅಡಿಕೆಯ ದರ ಇಳಿಕೆಗೆ ಸಜ್ಜಾಗಿರುವ ಖಾಸಗಿ ವರ್ತಕರಿಗೆ ಸಹಕಾರಿ ದೈತ್ಯ ಕ್ಯಾಂಪ್ಕೋ  ಒಂದು ರೀತಿಯಲ್ಲಿ ಅಡ್ಡಿಯಾಗಿದೆ. ಕ್ಯಾಂಪ್ಕೋ ನಡೆಯ ಮೇಲೆ ಎಲ್ಲರ ಕಣ್ಣು ಎಂಬಂತಾಗಿದೆ. ಕ್ಯಾಂಪ್ಕೋ ಬೆಳೆಗಾರರ ಬೆಂಬಲಕ್ಕೆ ನಿಂತಂತಿದೆ. ಕೆಂಪಡಿಕೆ ದಾರಣೆ ಇಳಿಕೆಯಾಗುತ್ತಿದ್ದಂತೆ ಹಸಿ ಅಡಿಕೆಯ ದರವೂ ಇಳಿಕೆಯಾಗಿದೆ. ಸಪ್ಟೆಂಬರ್…

Read more

ಭವಿಷ್ಯದಲ್ಲಿ ಕೃಷಿಗೆ ಇದು ಅತೀ ದೊಡ್ದ ಕಂಟಕ.

ಕೇರಳದಲ್ಲಿ ಆನೆಯೊಂದು ರೈತನ ಬೆಳೆ ಹಾಳು ಮಾಡಿದ್ದಕ್ಕೆ  ಕೊಲ್ಲಲ್ಪಟ್ಟರೆ, ದೇಶದಾದ್ಯಂತ ಸದ್ದು ಗದ್ದಲವಿಲ್ಲದೆ ಅದೆಷ್ಟೋ  ಕಾಡು ಪ್ರಾಣಿಗಳು ಕೊಲ್ಲಲ್ಪಡುತ್ತಿವೆ.  ಅರಿತ್ರಾ ಕ್ಷೇತ್ರಿ  Aritra Kshettri ಎಂಬ ಅಧ್ಯಯನಕಾರ Ministry of Science and Technology’s Innovation in Science Pursuit for Inspired Research programme. ಹೇಳುವಂತೆ 80% ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದಿವೆಯಂತೆ. ಇಲ್ಲಿ ರೈತನ ಬೆಳೆ ಮುಖ್ಯವೋ ಕಾಡು ಪ್ರಾಣಿಗಳು ಮುಖ್ಯವೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ ಎನ್ನುತ್ತಾರೆ. ಬೆಳೆ ರಕ್ಷಣೆ ಕಷ್ಟವಾಗುತ್ತಿದೆ: ಮಹಾರಾಷ್ಟ್ರದ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more
ಮಾವಿನ ಹೂವು ರಕ್ಷಣೆ: ಹೂ ಉದುರುವಿಕೆ ಕಡಿಮೆ ಮಾಡಿ ಉತ್ತಮ ಫಲ ಪಡೆಯುವ ಸಂಪೂರ್ಣ ಮಾರ್ಗದರ್ಶಿ.

ಮಾವಿನ ಹೂವು ರಕ್ಷಣೆ: ಹೂ ಉದುರುವಿಕೆ ಕಡಿಮೆ ಮಾಡಿ ಉತ್ತಮ ಫಲಪಡೆಯುವ ಸಂಪೂರ್ಣ ಮಾರ್ಗದರ್ಶಿ.

ಮಾವಿನ ಬೆಳೆಯಲ್ಲಿ ಹೂವು ಬಿಡುವ ಹಂತ (Flowering stage) ಎನ್ನುವುದು ಇಡೀ ಬೆಳೆಯ ಉತ್ಪಾದನೆಯನ್ನು ನಿರ್ಧರಿಸುವ ಅತ್ಯಂತ ಮುಖ್ಯ ಹಂತವಾಗಿದೆ. ಈ ವರ್ಷ ಬಹುತೇಕ ತೋಟಗಳಲ್ಲಿ ಹೆಚ್ಚು ಹೂ ಬಿದ್ದಿರುವುದು ಕಂಡುಬರುತ್ತಿದೆ. ಆದರೆ ರೈತರಿಗೆ ಗೊತ್ತಿರಬೇಕಾದ ಮುಖ್ಯ ವಿಚಾರವೇನೆಂದರೆ, ಹೂ ಹೆಚ್ಚು ಇದ್ದರೆ ಫಲವೂ ಹೆಚ್ಚು ಬರುತ್ತದೆ ಎಂಬುದು ತಪ್ಪು ಕಲ್ಪನೆ. ಮಾವಿನ ಉತ್ಪಾದನೆ ನೇರವಾಗಿ ಹೂಗಳ ಸಂಖ್ಯೆಯಿಂದ ಅಲ್ಲ, ಆದರೆ ಫಲಕಚ್ಚುವುದು  (Fruit set) ಮತ್ತು ಫಲಧಾರಣೆ (Fruit retention) ಮೇಲೆ ಅವಲಂಬಿತವಾಗಿರುತ್ತದೆ. ಮಾವು ಹೂ…

Read more
ಹತ್ತಿ ಹಿಂಡಿಯಲ್ಲಿ ಶಿಲೀಂದ್ರ ಬೆಳೆದಿರುವುದು

ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಕಾರಣವಾಗುವ ಆಹಾರ ವಸ್ತುಗಳು..

ನಾವು ಮತ್ತು ಪಶುಗಳಿಗೆ ತಿನ್ನಿಸುವ ಆಹಾರದಲ್ಲಿ ಕೆಲವೊಮ್ಮೆ ಶಿಲೀಂದ್ರ ಬೆಳೆದಿರುತ್ತದೆ. ಇದು ಒಂದು ವಿಷ.ಇದನ್ನು ಅಪ್ಲೋಟಾಕ್ಸಿನ್ ಎನ್ನುತ್ತಾರೆ. ಅಫ್ಲಾಟಾಕ್ಸಿನ್  ಎಂಬುದು ಒಂದು ವಿಧದ ಶಿಲೀಂದ್ರ ಉತ್ಪತ್ತಿ ಮಾಡುವ ವಿಷಕಾರಿ ಅಂಶ.  ನಾವು ಬಳಕೆ ಮಾಡುವ ಬೇರೆ ಬೇರೆ ವಸ್ತುಗಳ ಮೂಲಕ  ಅದು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮಲ್ಲಿ  ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.  ಈ ಶಿಲೀಂದ್ರದ  ಹೆಸರು : Aspergillus flavus.ಮತ್ತು  Aspergillus Parasiticus ಇದು ಬೀಜಾಣು ರೂಪದಲ್ಲಿ ಮನುಷ್ಯ  ಹಾಗೂ ಪ್ರಾಣಿಗಳ ಶರೀರಕ್ಕೆ ಸೇರಿದಾಗ, ಅದರ ವಿಷ ಜೀವ ಕೋಶಗಳ…

Read more

ಕೋಲ್ಜೇನು- ಜೇನು ತೆಗೆಯುವುದು ಸುಲಭ.

ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ  ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು ಸಲ ಜೇನು ತೆಗೆಯಲು ಸಾಧ್ಯ. ಅದಕ್ಕೆ  ಅನುಭವಿಯೇ ಆಗಬೇಕೆಂದೇನೂ  ಇಲ್ಲ. ಎಪಿಸ್ ಇಂಡಿಕಾ ಮತ್ತು ಎಪಿಸ್ ಮೆಲ್ಲಿಫೆರಾ ಎರಡು ವಿಧದ ಜೇನುನೊಣಗಳು  ಬಹು ಸಂಖ್ಯೆಯ  ಎರಿಗಳನ್ನು  ತಯಾರಿಸುವವು.   ಉಳಿದೆಲ್ಲಾ ಜೇನುನೊಣಗಳು ಅಂದರೆ  ಕೋಲು ಜೇನು, ಹೆಜ್ಜೇನು ಇವು ಒಂದೇ…

Read more
Good Source of Potash in Horticulture

Which is the Good Source of Potash in Horticulture Crops?

Potash is one of the most essential macronutrients required for healthy plant growth and quality yield in horticulture crops. But farmers often get confused between the two major forms of potash fertilizers available in the market: Muriate of Potash (MOP) and Sulphate of Potash (SOP). Choosing the right source of potassium is key to achieving…

Read more
error: Content is protected !!