ಅಡಿಕೆಗೂ ಬಂತು ಬಿಳಿ ನೊಣ
ಒಮ್ಮೆ ನಿಮ್ಮ ಅಡಿಕೆ ಮರದ ಗರಿಯ ಅಡಿ ಭಾಗವನ್ನು ಪರಾಂಬರಿಸಿ ನೋಡಿ. ಅಲ್ಲಲ್ಲಿ ಬಿಳಿ ಬಿಳಿ ಕಾಣಿಸುತ್ತದೆಯಲ್ಲವೇ? ಒಂದು ವೇಳೆ ಹಗಲು ಕಾಣದಿದ್ದರೆ ರಾತ್ರೆ ಟಾರ್ಚ್ ಲೈಟ್ ಬಿಟ್ಟು ನೋಡಿ. ಖಂಡಿತವಾಗಿಯೂ ಕಾಣಿಸುತ್ತದೆ. ಇದು ಬೊರ್ಡೋ ಹೊಡೆದು ಆದರ ಅವಶೇಷ ಎಂದು ತಿಳಿಯದಿರಿ. ಆ ಕೆಳಭಾಗದ ಗರಿಗಳು ಆಗಲೇ ಉದುರಿ ಹೋಗಿವೆ. ಇದು ಬಿಳಿ ನೊಣ ಎಂಬ ರಸ ಹೀರುವ ಕೀಟ, ಅಡಿಕೆಯ ಕೆಳ ಭಾಗದ ಗರಿಯಲ್ಲಿ ವಾಸ್ತವ್ಯ ಮಾಡಿರುವುದು. ಇದು ಇತ್ತೀಚಿನೆ ಬೆಳವಣಿಗೆ. ಬಹುಷಃ ಯಾರೂ…
