ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.
ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…
