ಮಳೆಗಾಲಕ್ಕೆ ಮುಂಚೆ ಬಸಿಗಾಲುವೆ ಸ್ವಚ್ಚ ಮಾಡಬೇಕಾದದ್ದು ಅಗತ್ಯ ಕೆಲಸ

ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.

ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ  ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…

Read more

ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ. ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ…

Read more
ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಶಿಲೀಂಧ್ರ ನಾಶಕಗಳ ಅತಿಯಾದ ಬಳಕೆ: ರೋಗ ನಿಯಂತ್ರಣವೇ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದೇ?

ಶಿಲೀಂಧ್ರ ನಾಶಕಗಳ ಅತಿಯಾದ ಬಳಕೆ: ರೋಗ ನಿಯಂತ್ರಣವೇ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದೇ?

ರೋಗ ನಿಯಂತ್ರಣಕ್ಕೆ ಶಿಲೀಂಧ್ರನಾಶಕ ಬಳಸಿ — ಆದರೆ ಮಣ್ಣಿನಲ್ಲಿರುವ ಎಲ್ಲಾ ಶಿಲೀಂಧ್ರಗಳನ್ನು ನಾಶಮಾಡಲು ಅಲ್ಲ. ಕೃಷಿಯಲ್ಲಿ ರೋಗ ನಿಯಂತ್ರಣಕ್ಕೆ ಶಿಲೀಂಧ್ರನಾಶಕಗಳು ಬಹಳ ಮುಖ್ಯವಾದ ಸಾಧನಗಳಾಗಿವೆ. ಶಿಲೀಂಧ್ರಗಳು ಹಾಗೂ ಶಿಲೀಂಧ್ರದಂತಿರುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ನಿಯಂತ್ರಿಸಲು ರೈತರು ಇವುಗಳನ್ನು ಬಳಸುತ್ತಾರೆ. ಸರಿಯಾದ ಔಷಧಿ, ಸರಿಯಾದ ಪ್ರಮಾಣ, ಸರಿಯಾದ ಸಮಯ ಮತ್ತು ಸರಿಯಾದ ವಿಧಾನದಲ್ಲಿ ಬಳಸಿದರೆ ಶಿಲೀಂಧ್ರನಾಶಕಗಳು ಬೆಳೆಗಳನ್ನು ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಆದರೆ ಇಲ್ಲಿ ಒಂದು ಮುಖ್ಯ ವಿಚಾರವನ್ನು ನಾವು ಗಮನಿಸಬೇಕು. ಕೆಲವೊಮ್ಮೆ ತಜ್ಞರು ಸೂಚಿಸಿದ ಪ್ರಮಾಣಕ್ಕಿಂತ…

Read more

ಕಾಫೀ – ಬೋರರ್ ನಿಯಂತ್ರಣಕ್ಕೆ ಜೈವಿಕ ಪರಿಹಾರ.

ಕಾಫಿಯಲ್ಲಿ  ಕಾಯಿ ಕೊರಕ  ಎಲ್ಲಾ  ಕಡೆಯಲ್ಲೂ  ಕಂಡು ಬರುವ ದೊಡ್ದ  ಸಮಸ್ಯೆ.  ಕಪ್ಪು ಬಣ್ಣದ ಕೀಟವೊಂದು  ಕಾಫೀ ಕಾಯಿಯ ನಾಭಿ ಭಾಗದಲ್ಲಿ  ಒಳಸೇರಿ ಕೊರೆದು  ಕಾಯಿಯನ್ನು ಹಾಳು ಮಾಡುತ್ತದೆ. ಕಾಫಿಯ ಕಾಯಿಯ ಒಳಗೆ  ಪ್ರವೇಶ ಮಾಡಿ ಅಲ್ಲಿ ತೂತು ಕೊರೆದು  ಮೊಟ್ಟೆ ಇಡುತ್ತದೆ. ಅಲ್ಲೇ ಮೊಟ್ಟೆ  ಒಡೆಯುತ್ತದೆ. ಒಂದು ವರ್ಷದಲ್ಲಿ  ಕೀಟವು 8-10 ತಲೆಮಾರನ್ನು  ಅಲ್ಲೇ ಪೂರೈಸಿರುತ್ತದೆ.ಇದಕ್ಕೆ ವಿಷ ರಾಸಾಯನಿಕದ ಬದಲು ಜೈವಿಕ ವಿಧಾನ ಸುರಕ್ಷಿತ… ಜೀವನ ಚಕ್ರ: ಈ ಕೀಟ ಗಿಡದ ಮೇಲೆ  ಇರಲಿ, ನೆಲದಲ್ಲೇ …

Read more
ರೋಗ ಬಾರದ ಕರಿಮೆಣಸು ಸಿಗಂಧಿನಿ

ರೋಗ ಬಾರದ ಕರಿಮೆಣಸು – ಈ ತಳಿ ಹೇಗೆ ಅಭಿವೃದ್ದಿಯಾಯಿತು?

ಕರಿಮೆಣಸಿಗೆ ರೋಗ ಯಾವಾಗ ಬರುತ್ತದೆ, ಬೆಳೆ ಕೈಕೊಡುತ್ತದೆ ಎಂಬುದಕ್ಕೆ ಯಾರಲ್ಲಿಯೂ ಉತ್ತರ ಇಲ್ಲ. ರೋಗ ಬಾರದೆ ಇರುವ ತಳಿ ಬಹುಶಃ  ತನಕ ಇರಲಿಲ್ಲ. ಆದರೆ ಇತ್ತೀಚೆಗೆ ಒಬ್ಬರು ರೈತರು ತಮ್ಮ ಹೊಲದಲ್ಲಿ ಎಲ್ಲಾ ಬಳ್ಳಿಗಳೂ ರೋಗ ಬಂದಾಗಲೂ ನಾನು ಗಟ್ಟಿ ಎಂದು ಉಳಿದುಕೊಂಡ ಬಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಕಂಡುಕೊಂಡಿದ್ದಾರೆ. ಅದನ್ನು ತಜ್ಞರ ಜೊತೆ ಚರ್ಚಿಸಿ, ಅಧ್ಯಯನ ನಡೆಸಿ ಖಾತ್ರಿ ಮಾಡಿಕೊಂಡಿದ್ದಾರೆ. ಅದಕ್ಕೆ ರೈತರು ಪೇಟೆಂಟ್ ಸಹ ಪಡೆದಿದ್ದಾರೆ. ರೈತರ ಹೊಲದಲ್ಲಿ ಅಭಿವೃದ್ದಿಯಾದ ಕರ್ನಾಟಕದ…

Read more
ಶುಂಠಿ ಹೊಲ

ಶುಂಠಿ ಈಗ ನೆಟ್ಟರೆ ಬೆಳೆಗೆ ರೋಗ ಕಡಿಮೆ ಹೇಗೆ?.

ಶುಂಠಿ ಮುಂತಾದ  ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆಸುವರೇ ಕುಂಭ  ಮಾಸ ಅತ್ಯಂತ ಸೂಕ್ತ ಕಾಲ. ಶುಂಠಿಗೆ ಈ ವರ್ಷ ಬೆಲೆ ಕುಸಿತವಾಗಿದೆ ಎಂದು ಬೆಳೆ ಬಿಟ್ಟು ಬಿಡಬೇಡಿ. ಈ ವರ್ಷ ಮತ್ತೆ ಶುಂಠಿಗೆ ಚಾನ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಬಿತ್ತನೆ ಗಡ್ಡೆಯೂ ಕಡಿಮೆ ಬೆಲೆಗೆ ಲಭ್ಯ. ಮಾರ್ಚ್ ನಂತರ ಶುಂಠಿ ನೆಟ್ಟರೆ ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ರೋಗ ಸಾಧ್ಯತೆ ಕಡಿಮೆ. ಮಾಗಿ ತಿಂಗಳು ಅಥವಾ ಕುಂಭ ಮಾಸ ಕಳೆದರೆ ಮಳೆಗಾಲ. ಆಷಾಢ ಕಳೆದರೆ…

Read more
ಸಗಣಿ ಗೊಬ್ಬರ

ಸಗಣಿ ಗೊಬ್ಬರ – ಪರಿಪೂರ್ಣ ಸಾವಯವ ಪೋಷಕವಲ್ಲ.

ಕೆಲವು ರೈತರು ನಾನು ನನ್ನ ಬೆಳೆಗಳಿಗೆ ಹಸುವಿನ ಸಗಣಿ ಗೊಬ್ಬರವನ್ನು ಮಾತ್ರ ಕೊಡುವುದು ಎನ್ನುತ್ತಾರೆ. ಮರಗಳು ಹಚ್ಚ ಹಸುರಾಗಿ ಬೆಳೆಯುತ್ತವೆಯಾದರೂ ಪರಿಪೂರ್ಣ ಪೋಷಕಗಳು ಇಲ್ಲದ ಕಾರಣ ಫಸಲು ಅಷ್ಟಕ್ಕಷ್ಟೇ.ಯಾವುದೇ ಪ್ರಾಣಿಯ ತ್ಯಾಜ್ಯಗಳಿಂದ ಪಡೆಯುವ ಹಿಕ್ಕೆ ಅಥವಾ ಮಲದಲ್ಲಿ  ಎಷ್ಟು ಪೋಷಕಗಳಿರುತ್ತವೆ ಎಂಬುದು ಹಲವಾರು ಸಂಗತಿಗಳ ಮೇಲೆ ಅವಲಂಭಿಸಿದೆ. ಪ್ರಾಣಿಯ ದೇಹ, ಅವುಗಳ ತಳಿ, ವಯಸ್ಸು, ತೂಕ, ಆಹಾರ ಸೇವಿಸುವುದರ ಮೇಲೆ ಅವು ಮಾಡಿಕೊಡುವ ಗೊಬ್ಬರದ ಪ್ರಮಾಣ ಹೊಂದಿರುತ್ತದೆ. ಇಷ್ಟು ಮಾತ್ರವಲ್ಲ ಆ ಪ್ರಾಣಿಯ ಆರೋಗ್ಯ  ಮತ್ತು ಅದು…

Read more
Amarantus an short term vegetable

50,000ಖರ್ಚು ಮಾಡಿ 1 ತಿಂಗಳಲ್ಲಿ 1 ಲಕ್ಷ ಗಳಿಸುವ ಬೆಳೆ.

ಕೆಲವು ಅಲ್ಪಾವಧಿ ಬೆಳೆಗಳು ಸ್ವಲ್ಪ  ಹೆಚ್ಚಿನ ಲಾಭ ತಂದು ಕೊಡುತ್ತವೆ. ಅಂತದ್ದರಲ್ಲಿ ಒಂದು ಹರಿವೆ. ಸೊಪ್ಪು ತರಕಾರಿಗಳಿಗೆ ಕೆಲವು ಸೀಸನ್ ಗಳಲ್ಲಿ ಭಾರೀ ಬೇಡಿಕೆ. ಆ ಸೀಸನ್ ತಿಳಿದುಕೊಂಡು ಅದಕ್ಕನುಗುಣವಾಗಿ ಬೆಳೆ ಬೆಳೆದರೆ ಲಾಭವಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ  ತಿಳಿದುಕೊಂಡು ಸುರೇಶ್ ರವರು ಮಳೆಗಾಲದಲ್ಲಿ ಮತ್ತು ಮಳೆಗಾಲ ಮುಗಿಯುವ ಈ ಸಮಯದಲ್ಲಿ ಹರಿವೆ ಬೆಳೆದಿದ್ದಾರೆ. ಎರಡನೇ ಬೆಳೆ ಕಿತ್ತು ಆಗಿದೆ. ಮೂರನೇ ಬೆಳೆಯನ್ನು ಇನ್ನೇನು ಒಂದು ವಾರದಲ್ಲಿ ಬಿತ್ತನೆ ಮಾಡಲಿದ್ದಾರೆ. ಮಳೆಗಾಲ ಕಳೆದ ತಕ್ಷಣ  ಹರಿವೆ, ಬಸಳೆ ಮುಂತಾದ…

Read more
ತೆಂಗಿನ ಮರದ ಸುಳಿ ಕೊಳೆ

ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

ತೆಂಗಿನ ಮರದ ಶಿರ ಹೋಗುವುದಕ್ಕೆ ವಾತಾವರಣ ಕಾರಣ. ಇದು ಯಾವ ಪಕ್ಷಿ, ಪ್ರಾಣಿಯಿಂದಾಗಿ ಆಗುವುದಲ್ಲ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ   ಫಲಕಾರಿ. ಹಳ್ಳಿಯ ಜನ ಈಗಲೂ ಕುಪುಳು ಹಕ್ಕಿ Greater Coucal (ಬಾರದ್ವಾಜ ಪಕ್ಷಿ) ತೆಂಗಿನ ಗರಿಯಲ್ಲಿ ಕುಳಿತು ಮೂತ್ರ ಮಾಡಿದರೆ ತೆಂಗಿನ ಮರವೇ ಸತ್ತು ಹೋಗುತ್ತದೆ ಎಂದು ತಿಳಿದಿದ್ದಾರೆ. ಇದು ಈ ಹಕ್ಕಿಯಿಂದಾಗಿ ಆಗುವುದಲ್ಲ. ಹಕ್ಕಿಗಳು ಮೂತ್ರವನ್ನೇ ಮಾಡಲಾರವು. ಇದು ವಾತಾವರಣದ ಅನುಕೂಲ ಸ್ಥಿತಿ ಒದಗಿದಾಗ ಕೊಳೆತಿನಿ ಶಿಲೀಂದ್ರ ಬಾಧಿಸಿ ಉಂಟುಮಾಡುವ ರೋಗ.  ಸುಳಿ…

Read more
error: Content is protected !!