ರಾಜ್ಯದಲ್ಲಿ ಇಂದು ಅಡಿಕೆ ಧಾರಣೆ – ದಿ. 28-09-2021.
ಅಡಿಕೆ ಧಾರಣೆ ಚಾಲಿಯನ್ನು ಬಿಟ್ಟು ಉಳಿದವು ಹಿಮ್ಮುಖ ಚಲನೆಯನ್ನು ತೋರಿಸುತ್ತಿದೆ. ಚಾಲಿ ಅಡಿಕೆ ಖರೀದಿಯಲ್ಲಿ ಖಾಸಗಿಯವರ ಉತ್ಸಾಹ ಕಡಿಮೆಯಾಗಿದೆ. ಸಹಕಾರಿಗಳು ಅದರಲ್ಲೂ ಕ್ಯಾಂಪ್ಕೋ ದರ ಕರಾವಳಿಯಲ್ಲಿ ಉತ್ತಮ ಚಾಲಿಗೆ ರೂ.50,000 ಕ್ಕೆ ಖರೀದಿ ಮಾಡಿದೆ. ಖಾಸಗಿಯವರೂ ಸಹ ಕ್ಯಾಂಪ್ಕೋ ದರಕ್ಕೆ ಸಮನಾಗಿಯೇ ಖರೀದಿಸಿವೆ. 50,000 ಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿಲ್ಲ. ಕೆಂಪು ರಾಶಿ ಶಿರಸಿಯಲ್ಲಿ ಗರಿಷ್ಟ 52,399, ಯಲ್ಲಾಪುರದಲ್ಲಿ, 53,450 ಕ್ಕೆ ಖರೀದಿ ನಡೆದಿದೆ. ಚಾಲಿ ಸಹ 48,600 ಅತ್ಯಧಿಕ ದರವಾಗಿರುತ್ತದೆ. ಕೆಲವು ವರ್ತಕರು ಸ್ವಲ್ಪ…
