ಚಾಲಿ ಮತ್ತು ಕೆಂಪು ಅಡಿಕೆ ಧಾರಣೆ ದಿನಾಂಕ:29-09-2021
ಇಂದು ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ದರವನ್ನು ಯಥಾಸ್ಥಿತಿ ಕಾಯ್ದುಕೊಂಡ ಕಾರಣ ಖಾಸಗಿಯವರು ಅಡಿಕೆ ಬೇಕು ಎನ್ನದೆ ಕ್ಯಾಂಪ್ಕೋ ದರದಲ್ಲೇ ಖರೀದಿ ನಡೆಸುತ್ತಿದ್ದರು. ಅಡಿಕೆ ಒತ್ತಾಯದಲ್ಲಿ ಬೇಕು ಎನ್ನುವಂತಹ ಸ್ಥಿತಿ ಇರಲಿಲ್ಲ. ಶಿರಸಿ, ಸಿದ್ದಾಪುರಗಳಲ್ಲೂ ಚಾಲಿ ಸ್ವಲ್ಪ ಹಿಂದೆಯೇ ಇತ್ತು. ಓರ್ವ ವರ್ತಕರ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಸಿಪ್ಪೆ ಗೋಟು ( ಒಣಗಿದ ಸಿಪ್ಪೆ ಇರುವ ಚಾಲಿಗೆ ಸೂಕ್ತವಾದ ಅಡಿಕೆ) ದರ ಇಳಿಕೆಯಾಗಿದೆ. ವಾರದ…
