ಪೊಟ್ಯಾಶ್ ಇಲ್ಲವೇ? ಚಿಂತಿಸಬೇಡಿ. ಪೊಟ್ಯಾಶ್ ಇಲ್ಲದೆಯೂ ಬೆಳೆ ತೆಗೆಯಬಹುದು!
ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲ ಎಂದು ಕಾಳಸಂತೆಯಲ್ಲಿ ಸಿಗುವ ಪೊಟ್ಯಾಶ್ ಖರೀದಿಗೆ ಹೋಗಬೇಡಿ. ಪೊಟ್ಯಾಶ್ ಗೊಬ್ಬರ ಶಾಶ್ವತವಾಗಿ ಲಭ್ಯವಿಲ್ಲ ಎಂದು ಯಾರೂ ಹೇಳಿಲ್ಲ. ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಆ ತನಕ ರೈತರು ಪೊಟ್ಯಾಶ್ ಗಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ. ಸಸ್ಯಗಳಿಗೆ ಬೆಳವಣಿಗೆಯ ವಿವಿಧ ಹಂತಕ್ಕನುಗುಣವಾಗಿ ಪೊಟ್ಯಾಶಿಯಂ ಸತ್ವ ಬೇಕಾಗುತ್ತದೆ. ಪೊಟ್ಯಾಶ್ ಬರೇ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಮಾತ್ರ ಇರುವುದಲ್ಲ. ಬೇರೆ ಗೊಬ್ಬರಗಳಲ್ಲೂ ಇದೆ. ಹೆಚ್ಚಾಗಿ ನಾವು ಬೆಳೆಗಳಿಗೆ ಬಳಸುವ ಪೊಟ್ಯಾಶ್ ಗೊಬ್ಬರ…
