ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ 18-10-2021-ಕೆಂಪು ಸ್ವಲ್ಪ ಏರಿಕೆ.
ದಿನಾಂಕ 18-10-2021 ರ ಸೋಮವಾರ ರಾಜ್ಯದ ಬಹುತೇಕ ಎಲ್ಲಾ ಮಾರುಕಟ್ಟೆಯಲ್ಲೂ ಅಡಿಕೆ ವ್ಯವಹಾರ ನಡೆದಿದೆ. ಹೆಚ್ಚು ಏರಿಕೆ ಆಗದೆ,ಇಳಿಕೆಯೂ ಆಗದೆ ಸ್ಥಿರತೆಯನ್ನು ಕಾಯ್ದುಕೊಡಿದೆ. ಕರಾವಳಿಯಲ್ಲಿ ಖಾಸಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ತಾವು ಖರೀದಿಸಿದ ಮಾಲನ್ನು ಸಹಕಾರಿ ಮಾರುಕಟ್ಟೆಗೆ ಹಾಕಿ ತಕ್ಷಣ ನಗದೀಕರಣದಲ್ಲಿದ್ದಾರೆ. ಕ್ಯಾಂಪ್ಕೋ ತನ್ನ ಗಟ್ಟಿ ನಿಲುವಿನ ಮೂಲಕ ಬೆಲೆ ಕುಸಿಯಲು ಬಿಟ್ಟಿಲ್ಲ ಎನ್ನಬಹುದು. ಚಾಲಿ ಅಡಿಕೆಗೆ ಬೇಡಿಕೆ ಇದೆ. ಅಸೇ ರೀತಿಯಲ್ಲೂ ಸಿಪ್ಪೆ ಗೋಟು ಬೇಡಿಕೆ ಕಂಡು ಬರುತ್ತಿದೆ. ಚಾಲಿಯ ಬೇಡಿಕೆ ಕೆಲವೇ ಸಮಯದಲ್ಲಿ…
