ಅಡಿಕೆಗೆ ಯಾವಾಗ ದರ ಏರಿಕೆ ಆಗಬಹುದು? ಏನೆಲ್ಲಾ ಸಾಧ್ಯತೆಗಳಿವೆ?
ಎಲ್ಲರ ನಿರೀಕ್ಷೆ ಅಡಿಕೆಗೆ ದರ ಏರಿಕೆ ಆಗಬಹುದೇ? ಯಾವಾಗ,ಎಷ್ಟು? ಅಥವಾ ಇಳಿಕೆಯಾಗಬಹುದೇ ಎಂಬುದು.ಯಾರೂ ನಿರೀಕ್ಷಿಸದೆ ಇರುವಂತಹ ದರ ಇಳಿಕೆ ಚಾಲಿ ಮಾರುಕಟ್ಟೆಯಲ್ಲಿ ಆಗಿದೆ. ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬಂದು ರೂ.49,000 ದಿಂದ 44,000 ಸುಮಾರಿಗೆ ಕುಸಿದಿದೆ. ಇನ್ನೂ ಇಳಿಕೆಯಾಗಬಹುದು, ಚುನಾವಣೆ ಬೇರೆ ಇದೆ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಆದರೆ ನಮ್ಮ ಊಹೆ ಮತ್ತು ಮಾರುಕಟ್ಟೆ ನಡೆ ಬೇರೆಯೇ ಆಗಿರುತ್ತದೆ. ಅಡಿಕೆ ಉತ್ಪಾದನೆ ಹೆಚ್ಚಾಗಿದೆ. ಆದ ಕಾರಣ ಮಾರುಕಟ್ಟೆಗೆ ಧಾರಾಳ ಅಡಿಕೆ ಬರುತ್ತಾ ಇದೆ. ಅದಕ್ಕನುಗುಣವಾಗಿ ಬೇಡಿಕೆ…
