ಕಳೆ ನಿಯಂತ್ರಣದಲ್ಲಿ ಸಸ್ಯನಾಶಕಗಳ ಬಳಕೆ ಎಷ್ಟು ಸುರಕ್ಷಿತ?
ಕಳೆಗಳು ಕೃಷಿಯ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಕಳೆಯನ್ನು ನಿಯಂತ್ರಣ ಮಾಡದಿದ್ದರೆ ಬೆಳೆಯೊಂದಿಗೆ ನೀರು, ಪೋಷಕಾಂಶಗಳು, ಸೂರ್ಯನ ಬೆಳಕು ಮತ್ತು ಸ್ಥಳಕ್ಕಾಗಿ ಸ್ಪರ್ಧಿಸುತ್ತವೆ. ಆದರೆ ಕಳೆಗಳು ಯಾವಾಗಲೂ ಸಂಪೂರ್ಣವಾಗಿ ಹಾನಿಕಾರಕವೇ? ಖಂಡಿತವಾಗಿಯೂ ಅಲ್ಲ. ಯಾವ ಋತುವಿನಲ್ಲಿ, ಯಾವ ಬೆಳೆಯಲ್ಲಿ, ಬೆಳೆಯ ಯಾವ ಹಂತದಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಕಳೆ ನಿರ್ವಹಣೆ ಮಾಡಲಾಗುತ್ತಿದೆ ಎಂಬುದರ ಮೇಲೆ ಕಳೆಯ ಪಾತ್ರ ಬದಲಾಗುತ್ತದೆ. ನಮ್ಮ ಪೂರ್ವಜರು ಈ ವಿಷಯವನ್ನು ತಮ್ಮ ಅನುಭವದ ಮೂಲಕ ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದರು. ಹಿಂದಿನ ಕಾಲದಲ್ಲಿ ಹೊಲಗಳಲ್ಲಿ ಕಳೆ…
